ಬೈಕ್ ಟ್ಯಾಕ್ಸಿ ಸೇವೆ ನಿಷೇಧ ತೆರವು, ಅಗತ್ಯ ನೀತಿ ರೂಪಿಸಲು ಹೈಕೋರ್ಟ್ ವಿಭಾಗೀಯ ಪೀಠ ಸೂಚಿಸಿರುವ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಸಂಜೆ 5:30 ರ ಸುಮಾರಿಗೆ ವಿಧಾನಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಮಾತನಾಡಿ, ಆದೇಶದ ಪ್ರತಿ ಇನ್ನೂ ನೋಡಿಲ್ಲ. ಪ್ರತಿ ಬಂದ ನಂತರ ಪರಿಶೀಲನೆ ಮಾಡುತ್ತೇನೆ. ಇಲಾಖೆಯ ಕಮೀಷನರ್ ಜೊತೆ ಚರ್ಚೆ ಮಾಡುತ್ತೇನೆ. ಆದೇಶದ ಕುರಿತು ಸಂಪೂರ್ಣವಾಗಿ ಅವಲೋಕಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಸಿಂಗಲ್ ಬೆಂಚ್‌ನಲ್ಲಿ ನಿಷೇಧ ವಿಧಿಸಲಾಗಿತ್ತು, ಈಗ ವಿಭಾಗೀಯ ಪೀಠ ಅದನ್ನು ತೆರವುಗೊಳಿಸಿದೆ. ಈ ವಿಚಾರದಲ್ಲಿ ರಿಟ್ ಅರ್ಜಿಗೆ ಅವಕಾಶ ಇದೆ. ಲೀಗಲ್ ಒಪಿನಿಯನ್ ಪಡೆದು ಮುಂದಿನ ನಿರ್ಧಾರ ಮಾಡುತ್ತೇವೆ ಎಂದರು.