ವೇಮಗಲ್ ಪೊಲೀಸರಿಂದ ಜೂಜಾಟದ ಅಡ್ಡೆಯ ಮೇಲೆ ದಾಳಿ ೦೩ ಜನರ ಬಂಧನ, ೬೦೦೦ ನಗದು ವಶಕ್ಕೆ ಕೋಲಾರ ತಾಲ್ಲೂಕು ವೇಮಗಲ್ ಹೋಬಳಿಯ ಮದ್ದೇರಿ ಮಲ್ಲಾಂಡಹಳ್ಳಿ ಗ್ರಾಮದಲ್ಲಿ, ಹಣವನ್ನು ಪಣವಾಗಿಟ್ಟು ಇಸ್ಪೀಟು ಜೂಜಾಟ ನಡೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ವೇಮಗಲ್ ಪೊಲೀಸರು. ಆರೋಪಿಗಳಾದ ರಾಜೇಂದ್ರ ಪ್ರಸಾದ್,ಚೌಡಪ್ಪ , ರಂಜಿತ್ ಕುಮಾರ್ ನನ್ನು ವಶಕ್ಕೆ ಪಡೆದು, ಅವರಿಂದ ಪಣಕ್ಕಾಗಿ ಇಟ್ಟಿದ್ದ ?೬೦೦೦ ನಗದು ಹಣ ಹಾಗೂ ೫೨ ಇಸ್ಪೀಟು ಎಲೆಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ ಎಂದು ವೇಮಗಲ್ ಪೊಲೀಸರು ಮಂಗಳವಾರ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.