ವಿದ್ಯುತ್ ಲೈನ್ ಸ್ಪರ್ಶಿಸಿ ತೀವ್ರ ಗಾಯಗೊಂಡ ಮಂಗವನ್ನು ರಕ್ಷಿಸಿದ ಶ್ರೀ ರಾಮ ಸೇನಾ ನವೀನ್ ಕೋಲಾರ ನಗರದ ಶಾರದಾ ಚಿತ್ರ ಮಂದಿರ ರಸ್ತೆ ಯ್ಲಲಿ ಬುಧವಾರ ಮಧ್ಯಾನ ಒಂದು ಗಂಟೆಯಲ್ಲಿ ‘ಮಂಗವೊಂದು ವಿದ್ಯುತ್ ಪರಿವರ್ತಕದ ಮೇಲೆ ಕುಳಿತಿತ್ತು. ಏಕಾಏಕಿ ವಿದ್ಯುತ್ ಲೈನ್ ಸ್ಪರ್ಶದಿಂದ ಕೆಳಗೆ ಬಿದ್ದು, ಎದ್ದೆಳಲು ಸಾಧ್ಯವಾಗದೇ ನರಳಾಡುತ್ತಿದ್ದು ಇದನ್ನು ಗಮನಿಸಿದ ಶ್ರೀ ರಾಮ ಸೇನಾ ನವೀನ್ ರಕ್ಷಣೆಗೆ ಮುಂದಾದರು ಮಂಗವನ್ನು ರಕ್ಷಿಸಿ ಅದಕ್ಕೆ ನೀರುಣಿಸಿ ಮಾನವೀಯತೆ ಮೆರೆದಿದ್ದಾರೆ ಇನ್ನು ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ