ಬೆಂಗಳೂರು ಉತ್ತರ: ನಗರದಲ್ಲಿ ಹಸಿರು ಪಟಾಕಿ ಬಳಸಲು ಸಲಹೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್
ದೀಪಾವಳಿ ಹಬ್ಬದ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಹಸಿರು ಪಟಾಕಿ ಉಪಯೋಗಿಸುವಂತೆ ಸದಾಶಿವನಗರದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕರೆ ನೀಡಿದರು. ಈ ವರ್ಷ ರಾಜ್ಯದಲ್ಲಿ ಸಮೃದ್ಧಿಯ ಮಳೆಯಾಗಿದೆ. ರಾಜ್ಯದಲ್ಲಿ ಹಸಿರು ಪಟಾಕಿ ಉಪಯೋಗಿಸ ಬೇಕು ಎಂದರು. ಇನ್ನು ಬಿವೈ ರಾಘವೇಂದ್ರ ಆರೋಪಕ್ಕೆ ಡಿಕೆಶಿ ಕೌಂಟರ್ ಕೊಟ್ಟಿದ್ದು, ಅವರ ಬಳಿ ದಾಖಲೆ ಇದ್ದರೆ ಬಿಡಲಿ, ದಾಖಲೆ ಸಮೇತ ಬಿಡುಗಡೆ ಮಾಡಲಿ. ಬೇರೆ ಲೀಡರ್ಸ್ ಹಿಟ್ ಆ್ಯಂಡ್ ರನ್ ಮಾಡ್ತಾರಲ್ಲ, ಆ ರೀತಿ ರಾಘವೇಂದ್ರ ಅವರದ್ದು ಆಗೋದು ಬೇಡ ಎಂದರು.