ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಬಗ್ಗೆ ಯತೀಂದ್ರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಗುರುವಾರ ಮಧ್ಯಾಹ್ನ 3:30 ರ ಸುಮಾರಿಗೆ ಸಚಿವ ಈಶ್ವರ್ ಖಂಡ್ರೆ ಅವರು ಆಲಿ ಆಸ್ಕರ್ ರಸ್ತೆ ಬಳಿ ಮಾಧ್ಯಮಗಳ ಜೊತೆ ಮಾತನಾಡಿ, ಸಿಎಂ ಬದಲಾವಣೆ ಅನ್ನೋ ವಿಚಾರ ಅಪ್ರಸ್ತುತ, ಸದ್ಯ ಸಿಎಂ ಕುರ್ಚಿ ಕೂಡ ಖಾಲಿ ಇಲ್ಲ. ಈ ಬಗ್ಗೆ ಹೈ ಕಮಾಂಡ್ ನಾಯಕರು ತುಟಿಕ್ ಪಿಟಿಕ್ ಅನ್ನಬಾರದು ಅಂತ ಹೇಳಿದ್ದಾರೆ. ಬೇರೆಯವರ ವಿಚಾರ ನನಗೆ ಗೊತ್ತಿಲ್ಲ. ನಾನು ಹೈ ಕಮಾಂಡ್ ನಾಯಕರ ಮಾತು ಪಾಲಿಸುತ್ತೇನೆ. ಸಿದ್ದರಾಮಯ್ಯ ಗಟ್ಟಿ ಮುಟ್ಟಾಗಿದ್ದಾರೆ, ಅವರು ಕೊನೆ ಚುನಾವಣೆ ಅನ್ನೋದು ಅವರಿಗೆ ಬಿಟ್ಟಿದ್ದು. ಊಹಾಪೂಹಕ್ಕೆ ಕಿವಿ ಕೊಡೋ ಅವಶ್ಯಕತೆ ಇಲ್ಲ ಎಂದರು.