ಸೇಡಂ: ಐ ಲವ್ ಮೊಹಮ್ಮದ್ ಸಾಂಗ್ ಬಳಿಕ ಊಡುಗಿ ಗ್ರಾಮದಲ್ಲಿ ವಿವಾದದ ಕಿಡಿ ಹೊತ್ತಿಸಿದ 'ಪಂದ್ರ ಮಿನಿಟ್' ಸ್ಪೀಚ್ ಡಿಜೆ ಡ್ಯಾನ್ಸ್
ಕಲಬುರಗಿ : ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ತವರೂರು ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಊಡುಗಿ ಗ್ರಾಮದಲ್ಲಿ 'ಐ ಲವ್ ಮೊಹಮ್ಮದ್' ಬ್ಯಾನರ್ ಸಾಕಷ್ಟು ವಿವಾದದ ಕಿಡಿ ಹೊತ್ತಿಸಿತ್ತು. ಇದೀಗ ಇದೇ ಊರಲ್ಲಿ ಹಿಂದೂಗಳನ್ನ ಟಾರ್ಗೆಟ್ ಮಾಡೋ 'ಪಂದ್ರ ಮಿನಿಟ್' ಆಡಿಯೋ ಸ್ಪೀಚ್ಗೆ ಕುಣಿದು ಕುಪ್ಪಳಿಸಿರೋ ವಿಡಿಯೋ ವೈರಲ್ ಆಗಿದೆ.. ಅ6 ರಂದು ಮಧ್ಯಾನ 1 ಗಂಟೆಗೆ ವಿಡಿಯೋ ಲಭ್ಯವಾಗಿದೆ.. ಊಡುಗಿ ಗ್ರಾಮದಲ್ಲಿ ಸಂದಲ್ ಸಂದರ್ಭದಲ್ಲಿ ಡಿಜೆ ಹಾಕಿ ಮೆರವಣಿಗೆ ಮಾಡ್ತಿದ್ದ ವೇಳೆ ಸಂಸದ ಒವೈಸಿಯವರ ಭಾಷಣ ಪಂದ್ರ ಮಿನಿಟ್ ಸ್ಪೀಚ್ ಹಾಕಿ ಡ್ಯಾನ್ಸ್ ಮಾಡಿದ್ದು, ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.