ನಾಗಮಂಗಲ :ಚಿರತೆ ದಾಳಿಗೆ ಐದು ಕುರಿಗಳು ಬಲಿಯಾಗಿರುವ ಘಟನೆ ನಾಗಮಂಗಲ ತಾಲ್ಲೂಕು ಕೂಚಹಳ್ಳಿ ಗ್ರಾಮದಲ್ಲಿ ಜರುಗಿದೆ ಮಂಗಳವಾರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಈ ಗ್ರಾಮದ ತಮ್ಮಣ್ಣಗೌಡ ಅವರ ಕುರಿ ಕೊಟ್ಟಿಗೆಗೆ ನುಗ್ಗಿರುವ ಚಿರತೆ ಐದು ಕುರಿಗಳನ್ನು ಕೊಂದು ಪರಾರಿಯಾ ಗಿದೆ ಈ ಸಂಬಂಧ ಅರಣ್ಯ ಇಲಾಖೆ ಗೆ ದೂರು ದಾಖಲಿಸಲಾಗಿದೆ ಈ ಸಂಬಂಧ ಮಂಗಳವಾರ ಬೆಳಿಗ್ಗೆ 10.30ರ ಸಮಯದಲ್ಲಿ ಘಟನೆ ಕುರಿತು ಮಾಹಿತಿ ನೀಡಿರುವ ತಮ್ಮಣ್ಣ ಗೌಡ ಕಳೆದ ಆರು ತಿಂಗಳಿಂದ ಕೂಚಹಳ್ಳಿ ಗ್ರಾಮದ ರೈತರು ಚಿರತೆಯ ಹಾವಳಿಯಿಂದ ಕೃಷಿ ಚಟುವಟಿಕೆಗೆ ಜಮೀನಿನ ಬಳಿ ಹೋಗಲು ಹೆದುರುತ್ತಿದ್ದಾರೆ ಗ್ರಾಮಕ್ಕೆ ಚಿರತೆಯು ಕಂಠಕವಾ ಗಿದ್ದು ಈ ಹಿಂದೆ ಗ್ರಾಮದ ಕುರಿ ಆಡು ನಾಯಿ ತಿಂದು ಹಾಕಿತ್ತು ಎಂದು ತಿಳಿಸಿದ್ದಾರೆ.