ಕೆಜಿಎಫ್ : ಬಿಜಿಎಂಎಲ್ ಶಾಲೆಯನ್ನು ಖಾಸಗಿ ವ್ಯಕ್ತಿಗಳ ಆಡಳತಕ್ಕೆ ನೀಡಿದರೆ ನಮ್ಮ ಮಕ್ಕಳು ಮರಿಮಕ್ಕಳು ಬಿಜಿಎಂಎಲ್ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುವ ಅವಕಾಶದಿಂದ ವಂತಿತರಾಗುತ್ತಾರೆ ಮತ್ತು ಹಳೆ ವಿಧ್ಯಾರ್ಥಿಗಳ ಸಂಘವೆಂದು ಹೇಳಿಕೊಳ್ಳುವವರು ಶಾಲೆಯನ್ನು ಖಾಸಗಿಕರಣಗೊಳಿಸುವ ಹುನ್ನಾರ ನಡೆಸುತ್ತಿರುವುದರಿಂದ ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳ ಕೈಗಳಿಗೆ ನೀಡಬಾರದು ಎಂದು ಬಿಜಿಎಂಎಲ್ ಚಿನ್ನದ ಗಣಿ ಮಾಜಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಅನಿತಾ ರವರಿಗೆ ಮನವಿ ಪತ್ರ ಸಲ್ಲಿಸಿದರು.