ಶ್ರೀನಿವಾಸಪುರ: ರಸ್ತೆ ಅಗಲೀಕರಣಕ್ಕೆ ರೈತ ಸಂಘ ಆಗ್ರಹ, ಜನಪ್ರತಿನಿಧಿಗಳ ವಿರುದ್ಧ ಚಲ್ದಿಗಾನಹಳ್ಳಿ ಯಲ್ಲಿ ಆಕ್ರೋಶ
ರಸ್ತೆ ಅಗಲೀಕರಣಕ್ಕೆ ರೈತ ಸಂಘ ಆಗ್ರಹ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಶ್ರೀನಿವಾಸಪುರ : ಕೋಲಾರದಿಂದ ಶ್ರೀನಿವಾಸಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಗಲೀಕರಣ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಬಯಲುಸೀಮೆ ಕಾರ್ಯದರ್ಶಿ ಪ್ರಭಾಕರ್ ಗೌಡ ಆಗ್ರಹಿಸಿದ್ದಾರೆ. ಈ ರಸ್ತೆ ತೀರಾ ಕಿರಿದಾಗಿರುವುದರಿಂದ ಅಪಘಾತಗಳು ಹೆಚ್ಚಾಗಿದ್ದು, ಹಲವಾರು ಅಮೂಲ್ಯ ಜೀವಗಳು ಬಲಿಯಾಗಿವೆ ಎಂದು ಅವರು ಆರೋಪಿಸಿದ್ದಾರೆ. ಕಳೆದ ರಾತ್ರಿ ಚಲ್ದಿಗಾನಹಳ್ಳಿ ಕ್ರಾಸ್ ಬಳಿ ಕಾರು ಅಪಘಾತಕ್ಕೀಡಾದ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಪ್ರಭಾಕರ್ ಗೌಡ, ಕೋಲಾರವು ಬೃಹತ್ ತರ