ಕಳೆದ ಮೂರು ದಿನಗಳಿಂದ ಸದಾಶಿವನಗರದ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಪಕ್ಷದ ಶಾಸಕರು, ಸಚಿವರು ಭೇಟಿ ನೀಡುತ್ತಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಮೂರು ದಿನದಿಂದ ಇಲ್ಲೆ ಇದೇನಿ ನನಗೆ ತುಂಬಾ ಬೇಜಾರ್ ಆಗಿದೆ. ಮಾಧ್ಯಮಗಳಿಗೆ ನನ್ನ ಹತ್ತಿರ ಹೇಳಲು ಎನು ಇಲ್ಲ ಸಧ್ಯದ ಬೆಳವಣಿಗೆ ಬಗ್ಗೆ ನಾನು ಎನು ಹೇಳಲ್ಲ, ಎಲ್ಲವನ್ನ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಯಾವ ವಿಚಾರದ ಬಗ್ಗೆಯೂ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಎನ್ ಮಾತನಾಡಲ್ಲ ಎಂದರು.