ಬಳ್ಳಾರಿ ಹೊರವಲಯದ ಚೆರ್ಕುಂಟೆ ಕ್ರಾಸ್ ಬಳಿ ಬೈಕ್‌ನಿಂದ ಬಿದ್ದು ಬುಧವಾರ ಮಧ್ಯಾಹ್ನ 3ಗಂಟೆಗೆ ಯುವಕನೊಬ್ಬ ಮೃತಪಟ್ಟಿದ್ದಾನೆ. ಸ್ಥಳೀಯ ನಿವಾಸಿ ಅಝ್ಮತ್ (28) ಮೃತ. ಬೈಕ್‌ನಲ್ಲಿ ಪ್ರಯಾಣಿಸುವಾಗ ಆಯತಪ್ಪಿ ಬಿದ್ದು ಅಝ್ಮತ್ ಮೃತಪಟ್ಟಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಬಳ್ಳಾರಿ ಗ್ರಾಮಾಂತರ ಠಾಣೆಯಲ್ಲಿ ಬುಧವಾರ ಸಂಜೆ 6ಗಂಟೆಗೆ ಎಫ್‌ಐಆರ್ ದಾಖಲಾಗಿದೆ.