ಬೆಂಗಳೂರು ಉತ್ತರ: ಮಾತಾಡೋ ಹಕ್ಕಿದೆ ಎಂದು ಪಿಐಎಲ್ ವಜಾ ಮಾಡಲಾಗಿದೆ: ನಗರದಲ್ಲಿ ಪ್ರತಾಪ್ ಸಿಂಹ
ಹೈಕೋರ್ಟ್ ನಲ್ಲಿ ಅರ್ಜಿ ವಜಾ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಮಾಧ್ಯಮಗಳ ಜೊತೆ ನಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಮುಡಾದಲ್ಲಿ 14 ಸೈಟುಗಳನ್ನು ಪಡೆದಿದ್ದು ಹಗಲುದರೋಡೆ ಆಗಿತ್ತು, ಇಂಥ ಹಗಲು ದರೋಡೆ ಪ್ರಕರಣವನ್ನು ಹೈಕೋರ್ಟ್ ನಲ್ಲಿ ವಜಾ ಮಾಡಲಾಯಿತು. ಹಾಗೇ ಧರ್ಮಸ್ಥಳ ಮೇಲೆ ಅಪನಂಬಿಕೆ ಬರುವಂಥ ವಿಡಿಯೋ ಸಮೀರ್ ಮಾಡಿದ್ದ. ಇಷ್ಟೆಲ್ಲ ಕೆಲಸ ಮಾಡಿದ ಸಮೀರ್ ಗೆ ಸೆಷನ್ ಕೋರ್ಟ್ ಜಾಮೀನು ಕೊಡ್ತು. ಮಹೇಶ್ ತಿಮರೋಡಿ ಕೂಡಾ ಆರಾಮವಾಗಿ ಓಡಾಡಿಕೊಂಡಿದ್ದಾನೆ. ನಾನು ನ್ಯಾಯ ಸಿಗುವ ಸಣ್ಣ ಭರವಸೆಯಿಂದ ಹೈಕೋರ್ಟ್ ಗೆ ಪಿಐಎಲ್ ಹಾಕಿದ್ದೆ, ಹೈಕೋರ್ಟ್ ಬಾನು ಮುಷ್ತಾಕ್ ಅವರಿಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ