ಬೆಂಗಳೂರು ಉತ್ತರ: ಮಲ್ಲಿಕಾರ್ಜುನ ಖರ್ಗೆ ಅವರು ಆರೋಗ್ಯವಾಗಿದ್ದಾರೆ, ರೋಟಿನ್ ಚೆಕಪ್ ಅಷ್ಟೇ: ನಗರದಲ್ಲಿ ಸಿಎಂ ಸಿದ್ದರಾಮಯ್ಯ
ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ವಿಚಾರಿಸಿದ ನಂತರ ಬುಧವಾರ ಮಧ್ಯಾಹ್ನ 1:30 ರ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಖರ್ಗೆ ಅವರಿಗೆ ಸ್ವಲ್ಪ ಉಸಿರಾಟ ಸಮಸ್ಯೆಯಿಂದ ನಿನ್ನೆ ಅಡ್ಮಿಟ್ ಆಗಿದ್ದಾರೆ. ನಾಳೆ ಡಿಸ್ಚಾರ್ಜ್ ಆಗ್ತಾರೆ. ರೊಟೀನ್ ಚೆಕಪ್ ಗೋಸ್ಕರ ಬಂದಿದ್ದಾರೆ, ಅವರು ಆರೋಗ್ಯ ವಾಗಿದ್ದಾರೆ. ಖರ್ಗೆ ಅವರು ಚೆನ್ನಾಗೇ ಮಾತನಾಡಿದ್ರು, ರೊಟೀನ್ ಚೆಕಪ್ ಗೆ ಬಂದಿದ್ರು, ನಾಮರ್ಲ್ ಆಗಿದ್ದಾರೆ ಎಂದರು.