ವಿಧಾನಸೌಧದಲ್ಲಿ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಸಚಿವ ಮಧು ಬಂಗಾರಪ್ಪ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಅಸೆಂಬ್ಲಿ ಬರ್ತಿದೆ, ಮಿನಿಸ್ಟರ್ಸ್ ಗೆ ಸಾಕಷ್ಟು ಪ್ರಶ್ನೆ ಬರುತ್ತಿದೆ. ಮಿನಿಸ್ಟರ್ಸ್ ಇದ್ದು ಪ್ರಶ್ನೆಗಳಿಗೆ ಉತ್ತರ ನೀಡಿ ಅಂತ ಹೇಳಿದ್ದಾರೆ. ಅವಿಶ್ವಾಸ ಮಂಡನೆ ಅಂತ ಬಿಜೆಪಿ ಅವರು ಬಡಿದುಕೊಂಡಿರೋದು, ಅವರಿಗೆ ನೈತಿಕ ಹಕ್ಕೆ ಇರೋದಿಲ್ಲ. ಕಬ್ಬು ಬೆಳೆಗಾರರಿಗೆ FRP ಯಾರು ಮಾಡೋದು.? 8ನೇ ತಾರೀಖು ಪ್ರತಿಭಟನೆ ಮಾಡಲು ರೆಡಿಯಾಗಿದ್ದಾರೆ. ಯಾರು FRP ಫಿಕ್ಸ್ ಮಾಡಿರೋದು? ಯಾರ ವಿರುದ್ದ ಇವರು ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಸರ್ಕಾರದ ವಿರುದ್ದವೇ ಅವರು ಮಾಡೋದು. ಸುಮ್ನೆ ಎತ್ತಿಕಟ್ಟುವ ಕೆಲಸ ಇವರು ಮಾಡೋದು ಬಿಟ್ರೆ ಬೇರೆ ಏನು ಮಾಡುತ್ತಿಲ್ಲ ಎಂದರು.