ಅಫಜಲ್ಪುರ: ಕಲಬುರಗಿ: ಅಕ್ರಮವಾಗಿ ಸಾಗಿಸುತ್ತಿದ್ದ 14 ಸಾವಿರ ಕೆಜಿ ಪಡಿತರ ಅಕ್ಕಿ ವಶ
ಕಲಬುರಗಿಯ ಅಫಜಲಪುರ ತಾಲ್ಲೂಕಿನ ಮುದಬಾಳ ತಾಂಡದ ಬಳಿ ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 281 ಚೀಲ ಪಡಿತರ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ರಿಯಾಜ್ ಮುಜಾವರ್ ಎಂಬುವವರನ್ನು ವಶಕ್ಕೆ ಪಡೆದು ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.