ಶ್ರೀನಿವಾಸಪುರ: ಅಮ್ಮಗಾರಪೇಟೆ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಟಮೋಟೊ ಹಾಗೂ ಭತ್ತದ ಪೈರು ನಾಶ
ಅರಣ್ಯ ಇಲಾಖೆ ಸಿಬ್ಬಂದಿಯಿಂದ ಟಮೋಟೊ ಹಾಗೂ ಭತ್ತದ ಪೈರು ನಾಶ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಟೊಮೊಟೊ ಬೆಳೆ ನಾಟಿ ಮಾಡಿದ್ದಂತಹ ಟೊಮೊಟೊ ಬೆಳೆಯನ್ನು ಹಾಗೂ ಭತ್ತದ ಪೈರನ್ನು ಸಂಪೂರ್ಣವಾಗಿ ಅರಣ್ಯ ಇಲಾಖೆ ಸಿಬ್ಬಂದಿ ನಾಶಪಡಿಸಿದ್ದಾರೆಂದು ಅಮ್ಮಗಾರು ಪೇಟೆ ಗ್ರಾಮದ ರೈತ ಶ್ರೀರಾಮಪ್ಪ ಆರೋಪಿಸಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನ ಅಮ್ಮಗಾರಪೇಟೆ ಗ್ರಾಮದ ರೈತ ಶ್ರೀರಾಮಪ್ಪ ಹಾಗೂ ಗಣೇಶ್ ಸೋಮವಾರ ಮಧ್ಯಾಹ್ನ 3 ಗಂಟೆಯಲ್ಲಿ ಮಾತನಾಡಿ ಸುಮಾರು 50 ವರ್ಷಗಳಿಂದ ನಾವೇ ಸ್ವಾಧೀನದಲ್ಲಿರುವಂತಹ ನಮ್ಮದೇ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಕುಟುಂಬ ಜೀವನ ಮಾಡುತ್ತಿದ್ದೇವೆ, ಕೊಳವೆ ಬಾವಿ ಇಲ್ಲದ ಕಾರಣ ಮ