ಹಾಸನ: ನಗರದ ಹೊರವಲಯದ ಹೇಮಗಂಗೋತ್ರಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಮೇಲೆ ಹೆಜ್ಜೆನು ದಾಳಿ
Hassan, Hassan | Sep 26, 2025 ಹೇಮಗಂಗೋತ್ರಿ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ವಾಚ್ಮ್ಯಾನ್ ಅಸ್ವಸ್ಥಗೊಂಡಿದ್ದಾರೆ. ಅಲ್ಲದೇ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದಾಳಿಗೊಳಗಾಗಿದ್ದಾರೆ.ಹಾಸನ ಹೊರವಲಯದ ಕೆಂಚಟ್ಟಹಳ್ಳಿ ಬಳಿಯಿರುವ ಹೇಮ ಗಂಗೋತ್ರಿ ವಿ.ವಿ.ಯಲ್ಲಿ ಇಂದು ನಡೆಯುತ್ತಿದ್ದ ಕಬ್ಬಡಿ ಪಂದ್ಯಾವಳಿಗೆ ಪದವಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಿದ್ದ ವೇಳೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿದೆ.ಹೆಜ್ಜೇನು ದಾಳಿ ಮಾಡುತ್ತಿದ್ದಂತೆ ಗಾಬರಿಗೊಂಡ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.