ಕೆ.ಜಿ.ಎಫ್: ಸರ್ಕಾರಿ ಗೋಮಾಳ ಆಂಧ್ರ ಮೂಲದವರಿಗೆ ಖಾತೆ ರದ್ಧತಿಗೆ ದಸಂಸಸ ಒತ್ತಾಯ
KGF, Kolar | Dec 11, 2025 ಸರ್ಕಾರಿ ಗೋಮಾಳ ಆಂಧ್ರ ಮೂಲದವರಿಗೆ ಖಾತೆ ರದ್ಧತಿಗೆ ದಸಂಸಸ ಒತ್ತಾಯ ಕೆಜಿಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಮಿಟ್ಟಕೊತ್ತೂರು ಗ್ರಾಮದ ಸರ್ವೆ ನಂಬರ್ ೬೩ ರಲ್ಲಿ ಆಂಧ್ರ ಮೂಲದ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿದ್ದು ಈ ಕೂಡಲೇ ಸಮರ್ಪಕವಾಗಿ ದಾಖಲೆ ಪರಿಶೀಲಿಸಿ, ಖಾತೆ ರದ್ದುಗೊಳಿಸಬೇಕೆಂದು ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆಯಿಂದ ಕ್ಯಾಸಂಬಳ್ಳಿ ಕಂದಾಯ ಇಲಾಖೆ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆಯ ಕೆಜಿಎಫ್ ತಾಲೂಕು ಸಂಯೋಜಕ ಕಳ್ಳಿಕುಪ್ಪ ಮುನಿ ವೆಂಕಟಪ್ಪ ಮಾತನಾಡಿ, ಕ್ಯಾಸಂಬಳ್ಳಿ ಹೋಬಳಿ ಯ