ಮದ್ದೂರು: ಪಟ್ಟಣದಿಂದ ಭಾರತೀನಗರದ ಭಾರತಿ ಕಾಲೇಜಿನ 3000 ವಿದ್ಯಾರ್ಥಿಗಳಿಂದ ಮ್ಯಾರಥಾನ್, ಶಾಸಕ ಮಧು ಜಿ ಮಾದೇಗೌಡ ಭಾಗಿ
Maddur, Mandya | Sep 15, 2025 ಮದ್ದೂರು ತಾಲ್ಲೂಕು ಭಾರತೀನಗರದ ಭಾರತೀ ಕಾಲೇಜಿನಲ್ಲಿ ಸೆ.18 ರಿಂದ 3 ದಿನಗಳ ಕಾಲ ನಡೆಯಲಿರುವ ಭಾರತೀ ಉತ್ಸವ - 2025 ರ ಹಿನ್ನೆಲೆಯಲ್ಲಿ ಮದ್ದೂರಿನ ತಾಲ್ಲೂಕು ಕ್ರೀಡಾಂಗಣದಿಂದ ಭಾರತೀನಗರದ ವರೆಗೆ ವಾಕಥಾನ್ (ಮ್ಯಾರಥಾನ್) ಹಮ್ಮಿಕೊಳ್ಳಲಾಗಿತ್ತು. ಮದ್ದೂರು ಪಟ್ಟಣದಿಂದ ಈ ದಿನ ವಿದ್ಯಾರ್ಥಿಗಳ ಕಲರವ ಮದ್ದೂರು ಕ್ರೀಡಾಂಗಣದ ತುಂಬೆಲ್ಲಾ ಶ್ವೇತವಸ್ತ್ರದಾರಿಗಳ ದಂಡು ಕಂಡುಬಂತು. ಮದ್ದೂರು ಪಟ್ಟಣ ಕೋಮು ಗಲಬೆಯಿಂದ ಕಳೆದ ಎಂಟು-ಹತ್ತು ದಿನಗಳಿಂದ ವಿವಿಧ ಮೆರವಣಿಗೆ, ಪ್ರತಿಭಟನೆ ಉದ್ಗೋಷಗಳನ್ನು ಕಂಡಿದ್ದ ಮದ್ದೂರಿನ ಜನರಿಗೆ ವಿದ್ಯಾರ್ಥಿಗಳ ಕಲರವ ಹೊಸ ಚೈತನ್ಯವನ್ನು ತುಂಬಿತು. ಆದರೂ ಏನೋ ಕುತೂಹಲ, ಏನಿದು, ಯಾಕೀದು, ಏನು ಮೆರವಣಿಗೆ ಎಂತಲ್ಲ ಜನರು ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು. ಇದು ಭಾರತೀ ಕಾಲೇಜಿನ ವಿದ್ಯಾ