ಕೋಲಾರ: ಜಯನಗರದ ಯೋಧರ ಸ್ಮಾರಕದ ಬಳಿ ಹುತಾತ್ಮರಾದ ಯೋಧರ ಸ್ಮಾರಕದ ಬಳಿ ಶ್ರದ್ಧಾಂಜಲಿ
Kolar, Kolar | Sep 14, 2025 ಜಯನಗರದ ಡಾಕ್ಟರ್ ಬಿಆರ್ ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಯೋಧರ ಸ್ಮಾರಕದ ಬಳಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಸುಬೆದರ್ ಭೂಪೇಂದ್ರ ಸಿಂಗ್ ರವರ ಭಾವಚಿತ್ರ ಕ್ಕೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಮೌನ ಆಚರಿಸುವ ಮೂಲಕ ಭಾನುವಾರ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಮುರಳಿ ಗೌಡ ರವರು ಯೋಧರೆಂದರೆ ದೇಶದ ನಿಜವಾದ ನಾಯಕರು ಯೋಧರು ಗಡಿ ಕಾಯುವ ಕೆಲಮಾಡದಿದ್ದರೆ ನಾವು ನಮ್ಮವರೊಂದಿಗೆ ಸಂತೋಷದಿಂದಿರಲು ಸಾದ್ಯವೇ ಇಲ್ಲ.ತಮ್ಮ ಸುಖ ,ಶಾಂತಿ,ನೆಮ್ಮದಿ ಯನ್ನು ಬದಿಗಿಟ್ಟು ದೇಶವನ್ನು ಕಾಯಲು ಹಗಲಿರುಳು ,ನಿದ್ದೆ ಬಿಟ್ಟು ನಿಲ್ಲುವಂತಹ ಯೋಧರಿಗೆ ಸರಿಸಾಟಿಯಿಲ್ಲ.ಅಂತಹ ಯೋಧರು ಹುತಾತ್ಮ ರಾದಾಗ ಅವರಿಗೆ ಶ್ರದ್ದಾಂಜಲಿ ಅರ್ಪಿಸಬೇಕು ಎಂದ್ರು