ಬದಾಮಿ ಕನ್ನಡ ಭಾಷೆಗೆ ಬಾದಾಮಿ ಚಾಲುಕ್ಯರ ಕೊಡುಗೆ ಅಪಾರವಾಗಿದೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಕದಂಬರು ಬೆಳಕಿಗೆ ತರುವ ಕೆಲಸ ಮಾಡಿದರೆ ಕನ್ನಡ ಭಾಷೆಯನ್ನು ಬೆಳೆಸುವ ಕಾರ್ಯ ಮಾಡಿದವರು ಬಾದಾಮಿ ಚಾಲುಕ್ಯರು ಎಂದು ಶಶಿಧರ್ ಮೂಲಿಮನಿ ಹೇಳಿದರು ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಜರುಗಿದ ತಿಂಗಳ ಕನ್ನಡ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು