ಕೋಲಾರ: ನಗರದ ಶ್ರೀ ಕೃಷ್ಣ ದೇವಾಲಯಲಯದ ಗುದ್ದಲಿ ಪೂಜೆ ಕಾರ್ಯಕ್ರಮ
Kolar, Kolar | Oct 5, 2025 ಶ್ರೀ ನಂದ ಗೋಕುಲ ಶ್ರೀ ಕೃಷ್ಣ ಸೇವಾ ಟ್ರಸ್ಟ್ ವತಿಯಿಂದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಶ್ರೀ ಸಾಯಿ ಬಾಬಾ ದೇವಾಲಯ ಮುಂಭಾಗದಲ್ಲಿ ಶ್ರೀ ಕೃಷ್ಣ ದೇವಾಲಯಲಯದ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯರಾದ ಡಿ ಟಿ ಶ್ರೀನಿವಾಸ್ ಭೂಮಿ ಪೂಜೆಯನ್ನು ಭಾನುವಾರ ನೆರವೇರಿಸಿದರು.ಕಾರ್ಯಕ್ರಮ ಕುರಿತು ತಾಲ್ಲೂಕು ದಂಡಾಧಿಕಾರಿಗಳಾದ ಸುಧೀಂದ್ರ ಮಾತನಾಡಿ ಕನಸಿನಲ್ಲಿಯೇ ಇಡೀ ದೇಶವನ್ನು ಭಗವದ್ಗೀತೆ ಮೂಲಕ ಬಡಿದೆಬ್ಬಿಸುವ ಶಕ್ತಿಯಾಗಿರುವ ಶ್ರೀ ಕೃಷ್ಣ ದೇವರಿಗೆ ದೇವಾಲಯ ನಿರ್ಮಿಸಿ ಭಗವದ್ಗೀತೆ ಹಾಗೂ ಅವರ ಸಂದೇಶಗಳನ್ನು ನೀಡಲು ಮುಂದಾಗಿರುವುದು ಒಳ್ಳೆಯದು. ನಮ್ಮ ನಮ್ಮಲೇ ಇರುವ ಕೆಲವೊಂದು ವಿಭಿನ್ನ ದೋರಣೆಗಳನ್ನು ಬದೆಗಿಟ್ಟು ಸಮುದಾಯವನ್ನು ಕಟ್ಟುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಸಲಹೆ ನೀಡಿದರು.