ಕುಪ್ಪಂನಿಂದ ಕೃಷ್ಣನದಿ ನೀರು ಪಡೆಯಲು ಆಂಧ್ರ ಸಿಎಂ ಜತೆ ಚರ್ಚೆ: ಸಂಸದ ಮಲ್ಲೇಶ್ಬಾಬು ನೆರೆಯ ಆಂಧ್ರ ಪ್ರದೇಶದ ಕುಪ್ಪಂ ಜಿಲ್ಲೆಗೆ ಹರಿದಿರುವ ಕೃಷ್ಣಾ ನದಿ ನೀರನ್ನು ಕೋಲಾರ ಜಿಲ್ಲೆಗೆ ಹರಿಸಲು ಸಹಕರಿಸುವಂತೆ ಕೋರಿ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಗಮನಕ್ಕೆ ತಂದಿದ್ದು,ಈ ಕುರಿತು ಜನವರಿ ತಿಂಗಳಲ್ಲಿ ಚರ್ಚಿಸುವ ಭರವಸೆ ಸಿಕ್ಕಿದೆ ಎಂದು ಸಂಸದ ಎಂ.ಮಲ್ಲೇಶಬಾಬು ತಿಳಿಸಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆಯಲ್ಲಿ ಕೋಲಾರ-ಚಿಕ್ಕಬಳ್ಳಪುರ ಅವಿಭಜಿತ ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಆಯೋಜಿಸಿದ್ದ 'ಜಲಾಗ್ರಹ; ಹೋರಾಟದ ಪ