ಚಿಕ್ಕಬಳ್ಳಾಪುರ: ಶ್ರದ್ಧ ಭಕ್ತಿಯಿಂದ ನಡೆದ 20ನೇ ವರ್ಷದ ಹಜರತ್ ಖ್ವಾಜ ಪೀರ್ ಸೈದ್ ಷಾ ಗಯಾಸಲ್ಲಾ ಷಾ ನಸೀರಿ ಉರುಸ್
ಹಜರತ್ ಖ್ವಾಜ ಪೀರ್ ಸೈದ್ ಷಾ ಗಯಾಸಲ್ಲಾ ಷಾ ನಸೀರಿ ಅವರ 20ನೇ ಉರುಸ್ ನಗರದ ಹೊರವಲಯದಲ್ಲಿರುವ ಆಸ್ತಾನ ಬಹಷ್ಟಿ ಗಂಜ್ ಹೂನ್ನೇನಹಳ್ಳಿಯಲ್ಲಿ ಶ್ರಧ ಭಗ್ತಿಯಿಂದ ನೆರವೇರಿತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಹಸ್ರಾರು ಭಕ್ತರು ಉರುಸ್ ಹಾಗು ಜಶನ್ ಚಿರಾಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರದ್ಧೆ ಭಕ್ತಿ ಮೆರೆದರು.ಹೈದರಾಬಾದ್ನ ಚಿಸ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಧರ್ಮ ಗುರುಗಳಾದ ಖ್ವಾಜ ಷಾ ಮಹಮದ್ ಶಜಾಉದ್ದೀನ್ ಚಿಸ್ಟಿ ಖಾದ್ರಿ ಇಫ್ತಖಾರಿ ಮುಂದಾಳತ್ವದಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಯಿತು.