ಚಿಕ್ಕಮಗಳೂರು: ಪರಿಸರವನ್ನ ಉಳಿಸಿ, ಬೆಳೆಸಿ, ಕಾಪಾಡುವುದು ಎಲ್ಲರ ಕರ್ತವ್ಯ : ನಗರದಲ್ಲಿ ಶಾಸಕ ತಮ್ಮಯ್ಯ ಕರೆ.!
ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಪೂರ್ವಿಕರು ಉಳಿಸಿ ಹೋಗಿರುವ ಪರಿಸರವನ್ನ ಉಳಿಸಿ ಬೆಳೆಸಿ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ತಮ್ಮಯ್ಯ ಕರೆ ಕೊಟ್ಟರು. ಅರಣ್ಯ ಇಲಾಖೆಯ ಭದ್ರಾ ಹುಲಿ ಸಂರಕ್ಷಿತ ವಲಯದ ವತಿಯಿಂದ ಹಮ್ಮಿಕೊಂಡಿದ್ದ ವನ್ಯಜೀವಿ ಸಪ್ತಾಹ 2025 ವನ್ಯಜೀವಿ ಸಂರಕ್ಷಣೆಗಾಗಿ ನಡಿಗೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.