ವಿಧಾನಸಭಾ ಅಧಿವೇಶನದ ತಯಾರಿ ಹಿನ್ನೆಲೆ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ವಿಧಾನಸೌಧದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಶಾಸಕರ ಸಭೆಯನ್ನು ಕರೆದಿದ್ವಿ. ಸುರೇಶ್ ಕುಮಾರ್, ಬೆಲ್ಲದ, ವಿಶ್ವನಾಥ್ ಸೇರಿದಂತೆ ಎಲ್ಲರೂ ಬಂದಿದ್ದರು. ಅಶ್ವಥ್ ನಾರಾಯಣ, ಸಿಸಿ ಪಾಟೀಲ್ ಸೆಮಿನಾರ್ ಇರೋದಕ್ಕೆ ಬಂದಿರಲಿಲ್ಲ. ವಿಸ್ತೃತವಾಗಿ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ಶಾಸಕರು ಹಲವಾರು ಸಲಹೆಗಳನ್ನು ನೀಡಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಹೀಗಾಗಿ ಆ ಭಾಗದ ಸಮಸ್ಯೆಗಳ ಬಗ್ಗೆ ಆರಂಭದಲ್ಲಿ ಚರ್ಚೆ ಮಾಡಬೇಕು. ಪ್ರತಿ ಬಾರಿ ಸ್ಪೀಕರ್ ಉತ್ತರ ಕರ್ನಾಟಕಕ್ಕೆ ಕೊನೆಯಲ್ಲಿ ಚರ್ಚೆಗೆ ಕೊಡ್ತಾರೆ. ಸಿಎಂ ಉತ್ತರ ಹಾಕಿ ಮುಗಿಸಿ ಹೊರಡುತ್ತಾರೆ. ಹಾಗೆ ಆಗಬಾರದು, ಸಮಗ್ರವಾಗಿ ಚರ್ಚೆ ಆಗಬೇಕು,