ಜಮಖಂಡಿ: ನ್ಯಾಯಾಧೀಶ ಗವಾಯಿ ಅವರ ಮೇಲೆ ಶೂ ಎಸೆದ ಆರೋಪಿಯನ್ನ ಬಂಧಿಸಲು ಕಾನೂನು ವಿದ್ಯಾರ್ಥಿಗಳ ಒಕ್ಕೂಟದಿಂದ ಆಗ್ರಹ, ನಗರದಲ್ಲಿ ಪ್ರತಿಭಟನೆ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಎ.ಜಿ.ದೇಸಾಯಿ ವೃತ್ತದಲ್ಲಿ ಕಾನೂನು ವಿದ್ಯಾರ್ಥಿಗಳ ಒಕ್ಕೂಟದಿಂದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಆರೋಪಿಯನ್ನು ಬಂಧಿಸಲು ಆಗ್ರಹಿಸಿ ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು ಇದೇ ಸಂಧರ್ಭದಲ್ಲಿ ಹಣಮಂತ ಯಮಗಾರ್,ಪ್ರವೀಣ ಸರೇನ್ನವರ,ವಾಚನಾ ಶೃಂಗೇರಿ ಮಾತನಾಡಿ ಭಾರತದ ಶ್ರೇಷ್ಠ ನ್ಯಾಯಾಂಗ ವೇದಿಕೆಯಾದ ಸುಪ್ರೀಂ ಕೋರ್ಟ್ನಲ್ಲಿ ನಡೆದ ಘಟನೆ ದೇಶದ ನ್ಯಾಯಾಂಗದ ಇತಿಹಾಸದಲ್ಲಿ ಕಪ್ಪು ಅಧ್ಯಾಯವಾಗಿದೆ. ನ್ಯಾಯಮೂರ್ತಿ ಮೇಲೆ ಶೂ ದಾಳಿ ಕೇವಲ ವ್ಯಕ್ತಿಯ ಮೇಲಿನ ಕೃತ್ಯವಲ್ಲ: ಅದು ನ್ಯಾಯದ ಮೇಲಿನ ದಾಳಿ ಎಂದರು.