ಚನ್ನಪಟ್ಟಣ: ಮಾರ್ಚನಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಗಲಾಟೆ
ಮಾರ್ಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಗಲಾಟೆ ನಡೆದಿದೆ. ಮಂಗಳವಾರ ನಿರ್ದೇಶಕ ಚುನಾವಣೆ ನಿಗಧಿಯಾಗಿತ್ತು. ಹಾಲು ಉತ್ಪಾದಕರ ನಿರ್ದೇಶಕರ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಗಳು ಸರಿಯಾದ ಕ್ರಮ ವಹಿಸಿಲ್ಲ ಎಂದು ಆರೋಪಿಸಿ ಚುನಾವಣಾ ಅಧಿಕಾರಿಗಳನ್ನ ತೀವ್ರ ತರಾಟೆಗೆ ತಗೆದುಕೊಂಡಿದ್ದಾರೆ.