ಸೇಡಂ: ಸೇಡಂ ಸಹಕಾರಿ ಸಂಘಗಳ ನಿಬಂಧಕರ ಕಚೇರಿ ಮೇಲೆ ಲೋಕಾಯುಕ್ತರ ದಾಳಿ: ಬಲೆಗೆ ಬಿದ್ದ ಲಂಚಬಾಕರು ಯಾರು ಗೋತ್ತೆ?
ಕಲಬುರಗಿ : ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಸಹಕಾರಿ ಸಂಘಗಳ ನಿಬಂಧಕರ ಕಚೇರಿ ಮೇಲೆ ಲೋಕಾಯುಕ್ತರು ದಾಳಿ ನಡೆಸಿರೋ ಘಟನೆ ನಡೆದಿದ್ದು, ದಾಳಿ ವೇಳೆ ಲಂಚ ಪಡೆಯುತ್ತಿದ್ದ ಓರ್ವ ಅಧಿಕಾರಿ ಮತ್ತು ಕಂಪ್ಯೂಟರ್ ಅಪರೇಟರ್ ರೆಡ್ಹ್ಯಾಂಡ್ ಬಲೆಗೆ ಬಿದ್ದ ಘಟನೆ ಅ8 ರಂದು ಸಂಜೆ 4 ಗಂಟೆಗೆ ನಡೆದಿದೆ. ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಮಲ್ಲಿಕಾರ್ಜುನ ಮತ್ತು ಕಂಪ್ಯೂಟರ್ ಅಪರೇಟರ್ ಸಂಗೀತಾ 5 ಸಾವಿರ ರೂಪಾಯಿ ಲಂಚ ಪಡೆಯೋವಾಗ ರೆಡ್ಹ್ಯಾಂಡ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.. ಕೋಳಿ ಸಾಕಾಣಿಕೆ ಮತ್ತು ಸಹಕಾರಿ ಸಂಘದ ನೊಂದಣಿಗಾಗಿ ಬೀರಪ್ಪ ಎಂಬುವರ ಬಳಿ 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.. ಅದರಂತೆ 5 ಸಾವಿರ ಅಡ್ವಾನ್ಸ್ ಪಡೆಯೋವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ