ಮದ್ದೂರು: ಮದ್ದೂರಿನಲ್ಲಿ ಕೋರ್ಟ್ ನೋಟೀಸ್ ಜಾರಿ ಮಾಡಲು ತೆರಳಿದ್ದ ಸಿಬ್ಬಂದಿಗೆ ವಕೀಲ ಹಲ್ಲೆ
Maddur, Mandya | Oct 11, 2025 ಕೋರ್ಟ್ ನೋಟೀಸ್ ಜಾರಿ ಮಾಡಲು ತೆರಳಿದ್ದ ಸಿಬ್ಬಂದಿಗೆ ವಕೀಲರೊಬ್ಬರು ಹಲ್ಲೆ ಮಾಡಿರುವ ಘಟನೆ ಮದ್ದೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ಜರುಗಿದ್ದು ತಡವಾಗಿ ವರದಿಯಾಗಿದೆ. ಹರೀಶ್ ಎಸ್. ಕೆ ಹಲ್ಲೆಗೆ ಒಳಗಾದವರು. ವಕೀಲ ಸುರೇಶ್ ಎನ್. ಎಲ್ ಹಲ್ಲೆ ಮಾಡಿದ್ದಾರೆ ಎಂದು ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವ್ಯಕ್ತಿಯೊಬ್ಬರಿಗೆ ನೋಟೀಸ್ ಜಾರಿ ಮಾಡಲು ಮುಂದಾದಾಗ ಸಿಬ್ಬಂದಿ ತಡೆದು ವ್ಯಕ್ತಿ ಓಡಿ ಹೋಗಲು ಸಹಾಯ ಮಾಡಿದ್ದಾರೆ. ಮತ್ತೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕ ಹಲ್ಲೆ ನಡೆಸಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.