ಕುಷ್ಟಗಿ: ಗುಮಿಗೇರಿ ಗ್ರಾಮದ ಹತ್ತಿರ ಬಸ್ ಬೈಕ್ ಡಿಕ್ಕಿ ಬೈಕ್ ಸವಾರ ಪರಶುರಾಮ ಸ್ಥಳದಲ್ಲಿ ಮೃತ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಗುಮಿಗೇರಿ ಗ್ರಾಮದ ಹತ್ತಿರ ಬಸ್ ಬೈಕ್ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟ ಘಟನೆ ಇಂದು ನಡೆದಿದೆ. ಸೆಪ್ಟೆಂಬರ್ 15 ರಂದು ಬೆಳಗ್ಗೆ 11-30 ಗಂಟೆಗೆ ಮದ್ದಲಗಟ್ಡಿ ಗ್ರಾಮದ ಬೈಕ್ ಸವಾರ ಪರಶುರಾಮ ಮೋಡಿಕಾರ ಬೈಕ್ ಚಲಾಯಿಸುತ್ತಿರುವಾಗಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಬಸ್ ಕೇಳಗೆ ಬೈಕ್ ಸಿಗಿಹಾಕಿಕೊಂಡಿದೆ ಬಸ್ ನ ಹಿಂಬದಿಯ ಚಕ್ರವು ಬೈಕ್ ಸವಾರನ ಮೇಲೆ ಹತ್ತಿದ್ದರಿಂದ ಸವಾರ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ ಕುಷ್ಟಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ