ಜಮಖಂಡಿ: ಕುಡಿಯುವ ನೀರಿನ ಶುದ್ಧೀಕರಣದ ಜೊತೆಗೆ ಪರೀಕ್ಷೆ ಅವಶ್ಯ,ನಗರದಲ್ಲಿ ಶಾಸಕ ಜಗದೀಶ ಗುಡಗುಂಟಿ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ತಾಲೂಕಾ ಪಂಚಾಯಿ ಸಭಾ ಭವನದಲ್ಲಿ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಶಾಸಕ ಜಗದೀಶ ಗುಡಗುಂಟಿ ಮಾತಾನಾಡಿ ಮನುಷ್ಯನ ಆರೋಗ್ಯದಲ್ಲಿ ನೀರು ಹೆಚ್ಚಿನ ಮಹತ್ವ ನೀಡುತ್ತದೆ. ಅಂತಹ ನೀರು ಶುಧ್ದೀಕರಣದ ಅಗತ್ಯದ ಜೊತೆಗೆ ಕಾಲಕಾಲಕ್ಕೆ ಪರೀಕ್ಷೆಯನ್ನೂ ಸಹ ಮಾಡಬೇಕಾಗುತ್ತದೆ ಅದು ನಿಮ್ಮಿಂದ ಸರಿಯಾಗಿ ಆಗುತ್ತಿಲ್ಲ,ಸರಿಯಾಗಿ ನಿರ್ವಹಿಸುವಂತೆ ಎಂದು ತಾಲೂಕಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿ ವರದಿ ತಿಳಿಸದ ಬಳಿಕ ತಾಲೂಕಿನ ಶಾಲಾ ಪಾಠ ಸಮಯದಲ್ಲಿ ಶಿಕ್ಷಕರು ಮೊಬೈಲ್ ಬಳಕೆ ಮಾಡಬಾರದು ಅವುಗಳನ್ನು ಸ್ಟಾಫ್ ರೂಮನಲ್ಲಿ ಇಡುವ ವ್ಯವಸ್ಥೆ ಆಗಬೇಕು ಕಟ್ಟುನಿಟ್ಟಿನ ಕ್ರಮ ತಗೆದುಕೊಳ್ಳಿ ಎಂದರು.