ರಾಜಕೀಯದಲ್ಲಿ ಒಟ್ಟಾಗಿ ಅಲ್ಲ ಸಫರೇಟ್ ಆಗಿ ಮಾತನಾಡುವುದೆ ವಿಶೇಷ, ಡಿಕೆ ಶಿವಕುಮಾರ್ ದೆಹಲಿ ಭೇಟಿ ಬಗ್ಗೆ ಮಾಹಿತಿ ನನಗೆ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶಿವಾನಂದ ಸರ್ಕಲ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಸ್ಸಾಂ ವೀಕ್ಷಕರಾಗಿ ನೇಮಕ ಆಗಿದೆ, ಚುನಾವಣೆ ಕೆಲಸ ಮಾಡಬೇಕಾಗುತ್ತೆ. ವಿದೇಶ ಪ್ರವಾಸ ಮುಗಿಸಿ ಬಂದಿದ್ದೇನೆ, ಖಾಸಗಿ ಭೇಟಿ ಅಷ್ಟೇ, ದೆಹಲಿಗೆ 21, 22 ಕ್ಕೆ ಹೋಗ್ತಾ ಇದ್ದೇನೆ, ನಮ್ಮ ಜನರಲ್ ಸೆಕ್ರೆಟರಿ ಭೇಟಿ ಮಾಡುತ್ತೇನೆ, ನಮ್ಮ ಇಲಾಖೆ ಕೆಲಸ ಇವೆ ನಾಯಕತ್ವ ಗೊಂದಲ ಬಗ್ಗೆ ಹೈಕಮಾಂಡ್ ಗಮನಕ್ಕೆ ಇದೆ ಅವರೆ ಎಲ್ಲ ಬಗೆ ಹರಿಸುತ್ತಾರೆ, ನಾವು ಪದೆ ಪದೆ ಮನವಿ ಮಾಡುವ ಅವಶ್ಯಕತೆ ಇಲ್ಲ ಎಂದರು.