ಪಾವಗಡ: ಪಾವಗಡದಲ್ಲಿ ವಿಜೃಂಭಣೆಯಿಂದ ನಡೆದ 29ನೇ ವರ್ಷದ ಗಣೇಶೋತ್ಸವ
ಪಾವಗಡದ ಟೀಚರ್ಸ್ ಕಾಲೋನಿಯಲ್ಲಿ ವಿನಾಯಕ ಗೆಳೆಯರ ಬಳಗದಿಂದ 29ನೇ ವರ್ಷದ ಗಣೇಶೋತ್ಸವ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಸಕ ಎಚ್.ವಿ. ವೆಂಕಟೇಶ್ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸ್ಥಳೀಯ ಮುಖಂಡರು ಮತ್ತು ಭಕ್ತರು ಉಪಸ್ಥಿತರಿದ್ದರು.