ಕೋಲಾರ: ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ನಗರದಾದ್ಯಂತ ಗಸ್ತು
Kolar, Kolar | Nov 2, 2025 ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ನಗರದಾದ್ಯಂತ ಗಸ್ತು ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಪೊಲೀಸರಿಂದ ಗಸ್ತುಕಾರ್ಯ ನಡೆದಿದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ರವರ ಮಾರ್ಗದರ್ಶನದಂತೆ ಭಾನುವಾರ ರಾತ್ರಿ 9:00ಯಲ್ಲಿ ಮಂದಿರ,ಮಸೀದಿ ಚರ್ಚ್, ಎಟಿಎಂ ಬಸ್ಟ್ಯಾಂಡ್ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಪೊಲೀಸರು ಗಸ್ತು ಕಾಯ್ದು ಸಾರ್ವಜನಿಕರಿಗೆ ಶಿಸ್ತು ಕಾಪಾಡುವಂತೆ ತಿಳಿಸಿದ್ದಾರೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಸೂಚಿಸಿದ್ದಾರೆ