ಕಿತ್ತೂರು: ಹುಲಿಕಟ್ಟಿ ಗ್ರಾಮದಲ್ಲಿ ಕಿತ್ತೂರು ಪಿಎಸ್ಐ ವಿರುದ್ದ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ಕಿತ್ತೂರು ಪಿಎಸ್ಐ ಅಮಾನತು ಮಾಡುವಂತೆ ಡಿವೈಎಸ್ಟಿಗೆ ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಿರುವ ಘಟನೆ ಇಂದು ಸೋಮವಾರ 12 ಗಂಟೆಗೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಬೈಲಹೊಂಗಲ ಡಿವೈಎಸ್ಪಿಗೆ ಘೇರಾವ್ ಹಾಕಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು ಹೂಲಿಕಟ್ಟಿ ಪಿಕೆಪಿಎಸ್ ಠರಾವು ಸಭೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಕಿತ್ತೂರು ಪಿಎಸ್ಐ ಸಹಕಾರ ನೀಡಿದ ಆರೋಪ ಇರುವ ಕಾರಣ ಕಿತ್ತೂರು ಪಿಎಸ್ಐ ಪ್ರವೀಣ್ ಗಂಗೋಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ. ಬೈಲಹೊಂಗಲ ಡಿವೈಎಸ್ಪಿ ಶಾಂತವೀರಯ್ಯ ಹಿರೇಮಠಗೆ ಘೇರಾವ್ ಹಾಕಿ ಪೊಲೀಸರು ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೋರ ಹಾಕಲಾಗಿದೆ.