ಕಿತ್ತೂರು: ಕಿತ್ತೂರು ಪಟ್ಟಣದಲ್ಲಿ ಕಿತ್ತೂರು ಉತ್ಸವಕ್ಕೆ ಭರದಿಂದ ಸಾಗಿರುವ ಸ್ವಚ್ಛತಾ ಕಾರ್ಯ
ಕಿತ್ತೂರು ಉತ್ಸವಕ್ಕೆ ದಿನಗಣನೆ ಶುರುವಾಗಿದ್ದು ಅದರ ಪೂರ್ವಭಾವಿ ತಯಾರಿಗಾಗಿ ಬೆಳಗಾವಿ ಜಿಲ್ಲಾಡಳಿತ,ಕಿತ್ತೂರು ಪಟ್ಟಣ ಪಂಚಾಯಿತಿ,ಕಂದಾಯ ಹಾಗೂ ಲೋಕೋಪಯೋಗಿ ಇಲಾಖೆಗಳು ತಮ್ಮ ಸಿದ್ಧತೆ ನಡೆಸಿವೆ ಕಿತ್ತೂರಿನ ಪ್ರಮುಖ ಬೀದಿಗಳಲ್ಲಿ ಹಾಗು ಕೋಟೆ ಆವರಣದ ಒಳಗೆ ಹಾಗೂ ಹೊರಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ ಕೋಟೆ ಗೋಡೆಯ ಅಕ್ಕ ಪಕ್ಕದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸುವುದರ ಜೊತೆಗೆ ಕಸದ ವಿಲೇವಾರಿ ಅಚ್ಚುಕಟ್ಟಾಗಿ ನಡೆದಿದೆ ಅತಿ ಶೀಘ್ರದಲ್ಲೆ ಮುಗಿಸುವ ಕಾರ್ಯ ನಡೆದಿದ್ದು ಇದೇ ಅಕ್ಟೋಬರ್ 23,24,25 ರಂದು ನಡೆಯುವ ಕಿತ್ತೂರು ಉತ್ಸವಕ್ಕೆ ಇಂದು ಸೋಮವಾರ 1 ಗಂಟೆಗೆ ತಯಾರಿ ನಡೆಸಲಾಗುತ್ತಿದೆ.