ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಅವರು ಶುಕ್ರವಾರ ಮಧ್ಯಾಹ್ನ 3:30 ರ ಸುಮಾರಿಗೆ ಶೇಷಾದ್ರಿಪುರಂ ಬಳಿ ಮಾಧ್ಯಮಗಳ ಜೊತೆ ಮಾತನಾಡಿ, ಆರ್ ಎಸ್ ಎಸ್ ವಿರುದ್ದ ಸರ್ಕಾರ ನಿನ್ನೆ ವಿಶೇಷ ನಿರ್ಧಾರ ಮಾಡಿದ್ದು ಅದಕ್ಕೆ ಸ್ವಾಗತ ಇದೆ. ಇಂದು ಇಡೀ ರಾಜ್ಯದಲ್ಲಿ ಆರ್ ಎಸ್ ಎಸ್ ಬಗ್ಗೆ ಚರ್ಚೆ ನಡೆಯುತ್ತಿದೆ. ನೂರಾರು ವರ್ಷಗಳಿಂದ ಸಂಘ ಚಟುವಟಿಕೆ ಮಾಡುತ್ತಿದೆ, ರಾಷ್ಟ್ರದ ಸಂವಿಧಾನದ ಪ್ರಕಾರ ಯಾವುದೇ ಸಂಘ ಸಂಸ್ಥೆ ರಿಜಿಸ್ಟರ್ ಮಾಡಬೇಕು, ಪ್ರತಿ ವರ್ಷ ಅಲ್ಲಿ ಬರುವ ಆದಾಯ ಏನು ಎಲ್ಲಿಂದ ಬರುತ್ತಿದೆ ಎಂಬುದಕ್ಕೆ ಅಕೌಂಟೆಬಲಿಟಿ ಇರಬೇಕು. ಆದಾಯದ ಬಗ್ಗೆ ಆಡಿಟ್ ರಿಪೋರ್ಟ್ ಆಗ್ಲಿ ಬ್ಯಾಲೆನ್ಸ್ ಶೀಟ್ ಆಗ್ಲಿ ಯಾವತ್ತೂ ಆರ್ ಎಸ್ ಎಸ್ ಬಗ್ಗೆ ನೋಡಿಲ್ಲ, ಸಂಘವನ್ನು ರಿಜಿಸ್ಟರ್ ಮಾಡಿಸಿ ಮೊದಲು ,