ಮಸ್ಕಿ ತಾಲೂಕಿನ ಮಲ್ಲದಗುಡ್ಡ ಗ್ರಾಮದ ಶ್ರೀ ಆರೂಢ ಶ್ರೀ ಅಯ್ಯಪ್ಪ ತಾತನ 44ನೇ ಸೇವಾ ಕಾರ್ಯಕ್ರಮದ ಅಂಗವಾಗಿ ಶ್ರೀಮಠದಲ್ಲಿ ಭಾನುವಾರ 7 ಗಂಟೆಗೆ ನಡೆದ ಗಾಯನ ಹಾಗೂ ಜಾನಪದ ಸಂಗೀತ ಕಾರ್ಯಕ್ರಮದಲ್ಲಿ ಮಾನ್ವಿ ತಾಲೂಕು ತಡಕಲ್ ಗ್ರಾಮದ ಲಿಂಗರಾಜ ಇವರಿಗೆ ಸಮಾಜ ಸೇವೆ, ಧಾರ್ಮಿಕ ಸೇವಾ ಕಾರ್ಯದಲ್ಲಿ ಮಾಡುತ್ತಿರುವ ಉತ್ತಮ ಸಾಧನೆ ಹಾಗೂ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಆರೂಢ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಶ್ರೀ ಆರೂಢ ಅಯ್ಯಪ್ಪ ತಾತನವರು ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿ ಆಶೀರ್ವದಿಸಿದರು.