ಕೋಲಾರ: ಅಪ್ರಾಪ್ತ ಬಾಲಕಿಗೆ ಲೈಂಗಿಕವಾಗಿ ತೊಂದರೆ ನೀಡಿದ ಆರೋಪಿಗೆ ಕಲಂ 8ರ ಅಡಿ ಮೂರು ವರ್ಷ ಶಿಕ್ಷೆ ವಿಧಿಸಿದ ನಗರದ ಪೊಕ್ಸೋ ನ್ಯಾಯಾಲಯ
Kolar, Kolar | Sep 16, 2025 ಕೋಲಾರ ಮಹಿಳಾ ಪೊಲೀಸ್ ಠಾಣಾ ಸರಹದ್ದಿನ ಚಾಕರಾಸನಹಳ್ಳಿ ಗ್ರಾಮದ ಮುನಿಶಾಮಪ್ಪ ಬಿನ್ ಲೇಟ್ ಕದಿರಪ್ಪ ಎಂಬಾತ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ತೊಂದರೆ ನೀಡಿದ ಬಗ್ಗೆ ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಕೋಲಾರ ಮಹಿಳಾ ಪೋಲಿಸ್ ಅಧಿಕಾರಿ ರವರು ತನಿಖೆ ನೆಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಸದರಿ ಪ್ರಕರಣದ ಸಂಖ್ಯೆ ಸ್ಪೇಷಲ್.ಸಿ 59/2024 ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಪ್ರಸಾದ್.ಕೆ.ಬಿ ರವರು ಮಂಗಳವಾರ ಐ.ಪಿ.ಸಿ ಸೆಕ್ಷನ್ 363 ಮತ್ತು ಪೋಕ್ಸೊ ಕಾಯಿದೆ ಕಲಂ 8ರ ಅಡಿಯಲ್ಲಿ ಆರೋಪಿಗೆ ಮೂರು ವರ್ಷ ಶಿಕ್ಷೆ ಮತ್ತೆ ರೂ.10,000 ದಂಡ ವಿಧಿಸಿ ನೊಂದ ಬಾಲಕಿಗೆ ಸರ್ಕಾರದ ವತಿಯಿಂದ 1ಲಕ್ಷ ಪರಿಹಾರಕ್ಕೆ ಆದೇಶಿಸಿದ್ದಾರೆ.