ಮದ್ದೂರು: ತಗ್ಗಹಳ್ಳಿಯಲ್ಲಿ ಪೌತಿ ಖಾತೆ ಮಾಡಲು ಲಂಚ ಪಡೆಯುವಾಗಲೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ
Maddur, Mandya | Oct 13, 2025 ಪೌತಿ ಖಾತೆ ಮಾಡಲು 5 ಸಾವಿರ ರೂ ಲಂಚ ಪಡೆಯುವಾಗ ಪಿಡಿಒ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಜರುಗಿದೆ. ಮದ್ದೂರಿನ ತಗ್ಗಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಘಟನೆ ನಡೆದಿದ್ದು, ಸಚಿನ್ ಲೋಕಾಯುಕ್ತರ ಬಲೆಗೆ ಬಿದ್ದ ಪಿಡಿಒ. ತಗ್ಗಹಳ್ಳಿ ಗ್ರಾ.ಪಂ ಪಿಡಿಒ ಆಗಿರುವ ಸಚಿನ್. ಚಿಕ್ಕೋನಹಳ್ಳಿ ಗ್ರಾಮದ ಶಿವಲಿಂಗಯ್ಯ ಎಂಬ ವೃದ್ದರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಪೌತಿ ಖಾತೆ ಮಾಡಿಕೊಡಲು ಸುಮಾರು 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಶಿವಲಿಂಗಯ್ಯ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಪಿಡಿಒನನ್ನು ಬಲೆಗೆ ಬೀಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮಂಡ್ಯ ಲೋಕಾಯುಕ್ತ ಕಚೇರಿ ಅಧಿಕಾರಿಗಳು ಪಾಲ್ಗೊಂಡಿದ್ದರು.