ಸಾಗರ: ನ.9 ರಂದು ಗಾಂಧಿನಗರ ಯುವಕರ ಸಂಘದ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ: ಸಾಗರದಲ್ಲಿ ಆಯೋಜಕ ಸಂತೋಷ್ ಸದ್ಗುರು
Sagar, Shimoga | Nov 4, 2025 ಸಾಗರದ ಗಾಂಧಿನಗರ ಯುವಕರ ಸಂಘ 50 ವರ್ಷ ಪೂರೈಸಿರುವ ಹಿನ್ನೆಲೆ ನವೆಂಬರ್ 9ರಂದು ಸಾಗರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಹಾಗೂ ನವೆಂಬರ್ 7, 8 ಮತ್ತು 9ರಂದು ಸಾಗರದಲ್ಲಿರುವ ವಿವಿಧ ಸಂಘ-ಸಂಸ್ಥೆಗಳಿಗಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸಾಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಆಯೋಜಕ ಸಂತೋಷ್ ಸದ್ಗುರು ತಿಳಿಸಿದರು.