ಬ್ಯಾಟರಾಯನಹಳ್ಳಿ ಗೆ 2 ಹೈಮಾಸ್ಟ್ ವಿದ್ಯುತ್ ದೀಪಗಳ ಅಳವಡಿಕೆಗೆ ಶಾಸಕರಿಗೆ ಮನವಿ ಕೆಜಿಎಫ್ ತಾಲೂಕಿನ ಬೇತಮಂಗಲ ಹೋಬಳಿಯ ಕಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಟರಾಯನಲ್ಲಿ ಗ್ರಾಮಕ್ಕೆ ಹೈ ಮಾಸ್ಟ್ ವಿದ್ಯುತ್ ದ್ವೀಪ ಅಳವಡಿ ಸಬೇಕಾಗಿ ಗ್ರಾಮಸ್ಥರು ಶುಕ್ರವಾರ ಸಂಜೆ 6 ಗಂಟೆಯಲ್ಲಿ ಶಾಸಕಿಯ ರೂಪಕಲಾ ಶಶಿಧರ್ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಗ್ರಾಮದ ಮಹಿಳೆ ರೂಪ ಮಾತನಾಡಿ, ನಮ್ಮ ಗ್ರಾಮದಲ್ಲಿ ಸುಮಾರು 300ಕ್ಕೂ ಅಧಿಕ ಕುಟುಂಬಗಳಿದ್ದು ಈಗಾಗಲೇ ಒಂದು ಹೈ ಮಸ್ಟ್ ವಿದ್ಯುತ್ ದೀಪವಿದ್ದು ಇನ್ನು 2 ಹೈಮಾಸ್ಟ್ ವಿದ್ಯುತ್ ಅಳವಡಿಸಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಲಾಗಿದೆ ಎಂದರು.