ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಉಪ ವಿಭಾಗಗಳಲ್ಲಿ ಅಗತ್ಯ ದಾಖಲೆಗಳು ಸಿದ್ಧವಿರುವ ಕನಿಷ್ಠ 100 ಅರ್ಜಿಗಳಿರುವ ಬೃಹತ್ ವಸತಿ ಸಮುಚ್ಚಯ ಕಟ್ಟಡ ಪ್ರದೇಶಗಳಲ್ಲಿ ಇ-ಖಾತಾ ಮೇಳ ಕೈಗೊಳ್ಳಲು ಉತ್ತರ ನಗರ ಪಾಲಿಕೆಯು ಸಿದ್ಧವಿರುವುದಾಗಿ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ತಿಳಿಸಿದರು. ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಯಲಹಂಕದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಬೃಹತ್ ವಸತಿ ಸಮುಚ್ಚಯಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಇ-ಖಾತಾ ಕುರಿತು ಚರ್ಚಿಸಿ, ಸಭೆಯಲ್ಲಿ ಹಾಜರಿದ್ದ ವಸತಿ ಸಮುಚ್ಛಯಗಳ ಪ್ರತಿನಿಧಿಗಳ ಕೋರಿಕೆಯ ಮೇರೆಗೆ ಆಯುಕ್ತರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉಪ ವಿಭಾಗಗಳಲ್ಲಿನ ಬೃಹತ್ ವಸತಿ ಸಮುಚ್ಚಯಗಳ ಕಟ್ಟಡಗಳ ಸಂಘದ ಪದಾಧಿಕಾರಿ