ಜೋಯಿಡಾ : ಪ್ರವಾಸಕ್ಕೆಂದು ಕುಟುಂಬ ಸಮೇತರಾಗಿ ಬಂದಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜೋಯಿಡಾ ತಾಲೂಕಿನ ಗಣೇಶಗುಡಿ - ಬರ್ಚಿ ರಸ್ತೆಯ ಅವೇಡಾದ ಹತ್ತಿರ ಸೋಮವಾರ ಸಂಜೆ 5:00 ಸುಮಾರಿಗೆ ನಡೆದಿರುವ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಗಣೇಶಗುಡಿಯಿಂದ ದಾಂಡೇಲಿ ಗೆ ಬರುತ್ತಿದ್ದ ಕೆಎ.11, ಬಿ.6638 ನೋಂದಣಿ ಸಂಖ್ಯೆಯ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅವೇಡಾದ ಹತ್ತಿರ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಕಾಡಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಕಾರು ಸಂಪೂರ್ಣ ಜಕಂಗೊಂಡಿದೆ. ಸಣ್ಣಪುಟ್ಟ ಗಾಯಗೊಂಡ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.