ಕಂಪ್ಲಿ ಪಟ್ಟಣದ ಶುಗರ್ ಫ್ಯಾಕ್ಟರಿ ಕೆನಲ್ ಬಳಿ ಬಳ್ಳಾರಿ ರಸ್ತೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ಟ್ರಾಕ್ಟರ್ ಗೆ ಢಿಕ್ಕಿ ಹೊಡೆದ ಘಟನೆ ಡಿ.16, ಬುಧವಾರ ರಾತ್ರಿ 8ಗಂಟೆಗೆ ನಡೆದಿದೆ. ಸ್ಥಳೀಯರ ಪ್ರಕಾರ, ಢಿಕ್ಕಿ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು, ಹೆಚ್ಚಿನ ಚಿಕಿತ್ಸೆಗೆ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಕರೆದೋಯ್ಯಲಾಗಿದೆ ಎನ್ನಲಾಗಿದೆ. ಸದ್ಯ ಬೈಕ್ ಸವಾರನ ಮಾಹಿತಿ ಲಭ್ಯವಾಗಿಲ್ಲ, ಸ್ಥಳಕ್ಕೆ ಕಂಪ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.