ಕೋಲಾರ: ನಂಗಲಿಯಲ್ಲಿ ಜಲ ಸಂರಕ್ಷಣೆ ಕಾಮಗಾರಿಗಳಿಗೆ ಕೇಂದ್ರ ತಂಡ ಮೆಚ್ಚುಗೆ
Kolar, Kolar | Oct 30, 2025 ಜಲ ಸಂರಕ್ಷಣೆ ಕಾಮಗಾರಿಗಳಿಗೆ ಕೇಂದ್ರ ತಂಡ ಮೆಚ್ಚುಗೆ  ಕೋಲಾರ : ಕೋಲಾರ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಅಡಿಯಲ್ಲಿ ಅನುಷ್ಠಾನಗೊಂಡಿರುವ ಜಲ ಸಂರಕ್ಷಣೆ ಕಾಮಗಾರಿಗಳನ್ನು ಕೇಂದ್ರ ಜಲಶಕ್ತಿ ಅಭಿಯಾನದ ನೋಡಲ್ ಅಧಿಕಾರಿಗಳು ಪರಿಶೀಲಿಸಿದರು. ಕೇಂದ್ರ ಟೆಲಿ ಕಮ್ಯುನಿಕೇಷನ್ ಇಲಾಖೆಯ ನಿರ್ದೇಶಕರಾದ ಶ್ರೀ ರೈತಿ ಮಾಧವ್ ರಾವ್, IಔಈS ಹಾಗೂ ಕೇಂದ್ರ ಅಂತರ್ಜಲ ಮಂಡಳಿಯ ವಿಜ್ಞಾನಿಗಳಾದ ಶ್ರೀಮತಿ ಅನಕಾ ಅಜಯ್ ನೇತೃತ್ವದ ಕೇಂದ್ರ ತಂಡ ಕ್ಷೇತ್ರ ಭೇಟಿ ನೀಡಿ, ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನದಡಿ ಅನುಷ್ಠಾನಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿವೀಕ್ಷಣೆ ಮಾಡಿದರು.  ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಂಗಲಿ, ಆಲಂಗೂರು,