ಕಂಗಾಂಡ್ಲಹಳ್ಳಿ ಗ್ರಾಪಂಯಲ್ಲಿ ಕೆರೆಗಳ ಹರಾಜು ಕೆಜಿಎಫ್ ತಾಲೂಕಿನ ಬೇತಮಂಗಲ ಕಂಗಾಂಡ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನು ಪಾಶುವಾರು ಹಕ್ಕಿನ ಹಾಗೂ ಹುಣಸೆ ಮರಗಳ ಫಸಲು ಹರಾಜು ಪ್ರಕ್ರಿಯೆಯೇ ಸೋಮವಾರ ಯಶಸ್ವಿಯಾಗಿ ನಡೆಯಿತು. ಗ್ರಾಮದ ಸಮೀಪದ ಕಂಗಾಂಡ್ಲಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಕೆರೆಗಳಲ್ಲಿ ಮೀನು ಪಾಶುವಾರು ಹಕ್ಕಿನ ಬಗ್ಗೆ ಬಹಿರಂಗ ಹರಾಜು ಪ್ರಕ್ರಿಯೆ ಸೋಮವಾರ ಮಧ್ಯಾನ 2 ಗಂಟೆಯಲ್ಲಿನಡೆಯಿತು. ಅದೇ ರೀತಿ ಹುಣಸೆ ಮರಗಳಲ್ಲಿನ ಫಸಲು ಪಡೆಯಲು ಸಹ ಬಹಿರಂಗ ಹರಾಜು ಬಿಡಲಾಯಿತು, ಹತ್ತಾರು ಮಂದಿ ವ್ಯಾಪಾರಿಗಳು ಮತ್ತು ಮೀನುಗಾರರು ಹರಾಜಿನಲ್ಲಿ ಪಾಲ್ಗೊ