ಅಧಿವೇಶನ ಕರೆದಿರುವ ವಿಚಾರಕ್ಕೆ ಸಂಬಂಧಿಸಿ ಸದಾಶಿವನಗರದಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಡಿಕೆ ಶಿವಕುಮಾರ್ ಅವರ ಭೇಟಿ ಬಳಿಕ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಜಂಟಿ ಅಧಿವೇಶನ ಕರೆದಿದ್ದಾರೆ, ಸಂಪ್ರದಾಯವಾಗಿ ರಾಜ್ಯಪಾಲರ ಭಾಷಣ ಇದೆ. ಗ್ರಾಮೀಣ ಭಾಗದಲ್ಲಿ ದೊಡ್ಡ ಅನ್ಯಾಯ ನಡೆದಿದೆ. ಮನರೇಗಾ ಬಿಲ್ ರದ್ದು ಮಾಡಿದ್ದಾರೆ. ಈ ವಿಚಾರವಾಗಿ ಚರ್ಚೆ ಮಾಡಲು 2 ದಿನ ಕರೆದಿದ್ದೇವೆ. ನನಗೆ ವಿಶೇಷ ಜವಾಬ್ದಾರಿ ಏನು ಇಲ್ಲ. ಅದು ನನ್ನ ಇಲಾಖೆಗೆ ಬರುತ್ತೆ. ನಮ್ಮ ಇಲಾಖೆಗೆ ಬರೋದ್ರಿಂದ ನಾವೇ ಮುಂದಾಳತ್ವ ವಹಿಸಿಕೊಳ್ಳಬೇಕಾಗುತ್ತೆ. ಜಿಬಿಜಿ ರಾಮ್ ಜಿ ಮತ್ತೆ ಮನರೇಗಾ ಈ ಎರಡರ ನಡುವೆ ಏನು ವ್ಯತ್ಯಾಸ ಇದೆ ಅನ್ನೋದನ್ನ ಜನರ ಮುಂದೆ ಇಟ್ಟಿದ್ದೇವೆ.