ಪೋಲಿಯೊ ಮುಕ್ತ ಭಾರತ ನಿರ್ಮಾಣದಲ್ಲಿ ಎಲ್ಲರೂ ಸಹಕಾರ ನೀಡಬೇಕೆಂದು : ಕೆ.ವೈ. ನಂಜೇಗೌಡ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಟೇಕಲ್ ಗ್ರಾಮದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ, ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಮೂಲಕ ಮಾಲೂರು ತಾಲ್ಲೂಕಿನ ಶಾಸಕರು ಹಾಗೂ ಕೋಮುಲ್ ಅಧ್ಯಕ್ಷರಾದ ಕೆ. ವೈ. ನಂಜೇಗೌಡರವರು ಚಾಲನೆ ನೀಡಿ, ಆರೋಗ್ಯವೇ ಪ್ರಥಮ ಆದ್ಯತೆ ಎಂಬ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸುವ ರಾಷ್ಟ್ರಮಟ್ಟದ